ನಮ್ಮ ಬಗ್ಗೆ

ಮುಖ್ಯ ಕಛೇರಿ:
ಮಲ್ಲೇಶ್ವರಂ, ಬೆಂಗಳೂರು-560055

ನಮ್ಮ ಬಗ್ಗೆ

ಬೆಂಗಳೂರು ನಗರದ ಪ್ರತಿಷ್ಟಿತ ಹಾಗೂ ಬಹು ಹಳೆಯ ಬಡಾವಣೆಯಾದ ಮಲ್ಲೇಶ್ವರಂ ಮತ್ತು ಸುತ್ತ ಮುತ್ತಲಿನ ಭಾಗಗಳಲ್ಲಿನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಗೃಹ ನಿರ್ಮಾಣ ಮತ್ತು ಇನ್ನಿತರ ಗೃಹಕೃತ್ಯದ ಉದ್ದೇಶದ ಸಾಲದ ಅವಶ್ಯಕತೆಗಳನ್ನು ಪೂರೈಸಲು ಯಾವುದೇ ಸಹಕಾರ ಸಂಸ್ಥೆಗಳು ಇಲ್ಲದೇ ಇದ್ದ ಸಮಯದಲ್ಲಿ ದಿವಂಗತ ಶ್ರೀ ಪಟೇಲ್ ನಂಜಪ್ಪ ರೆಡ್ಡಿಯವರ ನೇತೃತ್ವದಲ್ಲಿ ಶ್ರೀಯುತ ಹೆಚ್.ಎಸ್.ಲಕ್ಕೇಗೌಡ, ಶ್ರೀಯುತ ಚಿಕ್ಕನಂಜಯ್ಯ ಹಾಗೂ ದಿವಂಗತರುಗಳಾದ ಪಿ.ರಾಮ್ದೇವ್, ಬಿ.ಸೂರ್ಯನಾರಾಯಣರಾವ್, ಕೆ.ಜಿ.ತಿಮ್ಮಯ್ಯ, ಎಸ್.ಸಿ.ವೆಂಕಟೇಶ್, ಕೆ.ಪಾಂಡುರಂಗರಾವ್, ಆರ್.ಆರ್.ಕೋಮಂದೂರ್, ಎಂ.ಆರ್.ಜೆ.ಶರ್ಮ, ಕೆ.ರಾಮಸ್ವಾಮಿ, ಸಿ.ಆರ್.ವೆಂಕಟೇಶರಾವ್ ಮುಂತಾದ ಹಿರಿಯರ ಪ್ರಯತ್ನದಿಂದಾಗಿ ದಿನಾಂಕ 04.05.1964 ರಂದು ಮಲ್ಲೇಶ್ವರಂ, 17ನೇ ಅಡ್ಡ ರಸ್ತೆಯಲ್ಲಿನ ಬಾಡಿಗೆ ಕಟ್ಟಡದಲ್ಲಿ ಅಂದಿನ ಮೈಸೂರು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರಿಂದ ಉದ್ಘಾಟನೆಗೊಳ್ಳುವುದರ ಮೂಲಕ ದಿ ಜನತಾ ಕೋ ಆಪರೇಟಿವ್ ಬ್ಯಾಂಕ್ ಲಿ., ಸ್ಥಾಪನೆಗೊಂಡಿತು. ಬ್ಯಾಂಕಿನ ಮೊದಲ ಕಾರ್ಯಕಾರಿ ಸಮಿತಿಯಲ್ಲಿ ಕೆಳಕಂಡ ಮಹನೀಯರು ಕಾರ್ಯನಿರ್ವಹಿಸಿದ್ದು ಬ್ಯಾಂಕಿಗೆ ಭದ್ರ ಬುನಾದಿ ಹಾಕಿರುತ್ತಾರೆ.
ಪ್ರಥಮ ಕಾರ್ಯಕಾರಿ ಸಮಿತಿ ಸದಸ್ಯರು
ಶ್ರೀ ಎಸ್.ಸಿ.ವೆಂಕಟೇಶ್ ಅಧ್ಯಕ್ಷರು
ಶ್ರೀ ಪಿ.ರಾಮದೇವ್ ಉಪಾಧ್ಯಕ್ಷರು
ಶ್ರೀ ಸಿ.ಕೆ.ರಾಮಚಂದ್ರರಾವ್ ಗೌ|| ಕಾರ್ಯದರ್ಶಿ
ಶ್ರೀ ಹೆಚ್.ಎಸ್.ಲಕ್ಕೇಗೌಡ ಗೌ||ಕಾರ್ಯದರ್ಶಿ
ಶ್ರೀ ಶ್ರೀಕಾಂತ್ ಕಂಠಿ ಗೌ|| ಖಜಾಂಚಿ
ಶ್ರೀ ಬಿ.ಎನ್.ನರಸಿಂಹಯ್ಯ ಕಮಿಟಿ ಆಡಿಟರ್
ಶ್ರೀ ಕೆ.ಜಿ.ತಿಮ್ಮಯ್ಯ ಕಮಿಟಿ ಆಡಿಟರ್
ಶ್ರೀ ಬಿ.ಸೂರ್ಯನಾರಾಯಣ ರಾವ್ ನಿರ್ದೇಶಕರು
ಶ್ರೀ ಎಂ.ಮುನಿರತ್ನಂ ನಿರ್ದೇಶಕರು
ಶ್ರೀ ಬಿ.ಪುಟ್ಟರಾಜ್ ಅರಸ್ ನಿರ್ದೇಶಕರು
ಶ್ರೀ ಬಿ.ಎಸ್.ಚನ್ನಪ್ಪ ನಿರ್ದೇಶಕರು
ಪಟೇಲ್ ನಂಜಪ್ಪ ರೆಡ್ಡಿ ನಿರ್ದೇಶಕರು

ನಂತರದ ದಿನಗಳಲ್ಲಿ ಶ್ರೀ ಸಿ.ಎಲ್. ಗಂಗಾಧರಯ್ಯನವರ ನೇತೃತ್ವದಲ್ಲಿ ಅನೇಕ ಮಹಾನೀಯರುಗಳು ಬ್ಯಾಂಕಿನ ಪ್ರಗತಿಗಾಗಿ ದುಡಿದು ಸಂಸ್ಥೆಯ ಇತಿಹಾಸದಲ್ಲಿ ಅಮರರಾಗಿರುತ್ತಾರೆ. ಅಂತಹ ಮಹಾನೀಯರುಗಳ ಹೆಸರುಗಳನ್ನು ಮುಂದಿನ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ. ಎಸ್.ಎನ್.ನಂಜೇಗೌಡ
ಶ್ರೀ. ಸಿ. ಹನುಮಾನ್
ಶ್ರೀ. ಡಾ. ವಿ. ವೆಂಕಟೇಶ್
ಶ್ರೀ. ಆರ್. ಗೋವಿಂದಸ್ವಾಮಿ
ಶ್ರೀ. ಗಿರಿಯಣ್ಣ
ಶ್ರೀ. ಟಿ. ಚಿಕ್ಕರಾಮಯ್ಯ
ಶ್ರೀ. ಸಿ. ರಂಗಯ್ಯ
ಶ್ರೀ. ಕೆ. ದೇವಪ್ಪ
ಶ್ರೀ. ಜಿ.ವಿ. ಫಣಿಶಯನ್
ಶ್ರೀ. ಐ. ಸದಾಶಿವರೆಡ್ಡಿ
ಶ್ರೀ. ಡಿ.ವಿ. ರಾಮಚಂದ್ರನ್
ಶ್ರೀ. ಬಿ.ಸಿ. ರಾಮಕೃಷ್ಣಯ
ಶ್ರೀ. ಹೆಚ್.ಎಸ್. ಶಿರೋಮಣಿಯಮ
ಶ್ರೀ. ಸತ್ಯನಾರಾಯಣ.ಎನ್.ಕೆ
ಶ್ರೀ. ಹನುಮಂತರಾಯಪ್ಪ .ಎಂ
ಶ್ರೀ. ನರಸೇಗೌಡ
ಶ್ರೀ. ರಾಮಚಂದ್ರರಾವ್ .ಜಿ
ಶ್ರೀ. ಎಸ್.ವಿ. ವಿಶ್ವೇಶ್ವರಯ್ಯ
ಶ್ರೀ. ಆರ್. ಸಂಪತ್
ಶ್ರೀ. ಎಸ್. ನಂಜುಂಡಯ್ಯ
ಶ್ರೀ. ಕೆ. ವೀರಭದ್ರಪ್ಪ
ಶ್ರೀ. ಬಿ.ಕೆ. ದೊಡ್ಡಯ್ಯ
ಶ್ರೀ. ಎನ್.ಎಲ್.ವಿ. ಗುಪ್ತ
ಶ್ರೀ. ಮಾಣಿಕ್ ರಾವ್ ಕಲ್ಬುರ್ಗಿ
ಶ್ರೀ. ಜೆ. ಲಿಂಗಯ್ಯ
ಶ್ರೀ. ಮೇಜರ್ ನಾರಾಯಣ ಸಿಂಗ್ .ಎಂ.ಆರ್
ಶ್ರೀ. ಕೆ. ಗೋಪಾಲಕೃಷ್ಣ

ಮೇಲ್ಕಾಣಿಸಿದ ಮಹನೀಯರ ಜೊತೆಯಲ್ಲಿ ಸೇವೆ ಸಲ್ಲಿಸಿದ ಪ್ರೊ ಬಿ.ಆರ್.ಶೇಷಾದ್ರಿ ಐಯ್ಯಂಗಾರ್, ಪ್ರೊ ಹೆಚ್.ವಿ.ಶ್ರೀನಿವಾಸ ಶರ್ಮ, ಶ್ರೀ ಎಲ್.ಜೆ.ಗಂಗಾಧರಯ್ಯ, ಶ್ರೀ ಕೆ.ಪಿ.ಮುತ್ತಯ್ಯ, ಶ್ರೀ ಸುಗ್ಗಯ್ಯ, ಶ್ರೀ ಶಂಕರನಾರಾಯಣ, ಶ್ರೀ ನಾಡಿಗ್ ಸತ್ಯನಾರಾಯಣ ಶ್ರೀ ಸಿ. ರಾಮಕೃಷ್ಣ, ಶ್ರೀ ಟಿ.ಜಿ.ವರದರಾಜು, ಡಾ.ವಿ.ಕೆ.ಬೆಳ್ಳುಬ್ಬಿ, ಶ್ರೀ ಆರ್. ನರಸಿಂಹಯ್ಯ, ಶ್ರೀ ಆರ್.ಕೋದಂಡರಾಮು, ಶ್ರೀ ಎನ್.ಕೃಷ್ಣಮೂರ್ತಿ ಹಾಗೂ ಶ್ರೀಮತಿ ಬಿ.ಟಿ.ಸುಮಿತ್ರದೇವಮ್ಮ ಮುಂತಾದ ಹಿರಿಯರ ಸೇವೆಯನ್ನು ನಾವು ಸ್ಮರಿಸಿಕೊಳ್ಳಬೇಕಾಗುತ್ತದೆ, ಇನ್ನೂ ಹೆಚ್ಚಿನ ಸೌಭಾಗ್ಯವೆಂದರೆ ದಿವಂಗತ ಸಿ.ಎಲ್.ಗಂಗಾಧರಯ್ಯನವರ ಜೊತೆ ಜೊತೆಯಲ್ಲಿ ಬ್ಯಾಂಕಿನ ಸೇವೆ ಪ್ರಾರಂಭಿಸಿದ ಶ್ರೀ ಎಂ.ಜಯರಾಮೇಗೌಡ ಹಾಗೂ ಶ್ರೀ ಕೆ.ಪುಟ್ಟಸ್ವಾಮಿ ನಂತರದ ದಿನಗಳಲ್ಲಿ ಈ ತಂಡ ಸೇರಿದ ಹಿರಿಯರಾದ ಡಾ.ಎ.ಕಾಳಪ್ಪ ಮತ್ತು ಶ್ರೀ ಎ.ಗೋವಿಂದ ಇವರು ಪ್ರಸ್ತುತ ಆಡಳಿತ ಮಂಡಳಿಯಲ್ಲಿ ಮುಂದುವರೆದಿರುವುದು ನಮ್ಮ ಸುದೈವ.

ಇತ್ತೀಚಿನ ವರ್ಷಗಳಲ್ಲಿ ಆಡಳಿತ ಮಂಡಳಿಗೆ ಚುನಾಯಿತರಾಗಿ ತಮ್ಮ ಶಕ್ತಿಯಾನುಸಾರ ಬ್ಯಾಂಕಿನ ಅಭಿವೃದ್ದಿಗೆ ಶ್ರಮಿಸಿದ ಶ್ರೀಯುತರುಗಳಾದ ಬಿ. ಬೋರೆಗೌಡ, ಐ.ನಾರಾಯಣರೆಡ್ಡಿ, ಬಿ.ಕೆ.ಸತ್ಯನಾರಾಯಣ, ಕೆ.ಎಂ.ಶಿವಣ್ಣ, ಶ್ರೀಮತಿ. ಎಸ್.ಎನ್.ಲತಾ ಮತ್ತು ವೃತ್ತಿಪರ ನಿರ್ದೇಶಕರುಗಳಾಗಿ ಸೇವೆ ಸಲ್ಲಿಸಿದ ಶ್ರೀ ಡಿ.ದೇವರಾಜ್ ಮತ್ತು ಶ್ರೀ ಸಿ.ಎ.ಕೃಷ್ಣಮೂರ್ತಿ ಇವರ ಸೇವೆಯನ್ನು ಸ್ಮರಿಸಲೇಬೇಕು.

ಈ ಸಂಸ್ಥೆಯ ಹೆಗ್ಗಳಿಕೆ ಎಂದರೆ ಬ್ಯಾಂಕಿನ ಆಡಳಿತ ವರ್ಗದಲ್ಲಿ ಯಾವುದೇ ಸಮಯದಲ್ಲಿ ನಾಯಕತ್ವದ ಶೂನ್ಯತೆ ಉಂಟಾಗದೇ ಇರುವುದು. ಈ ಕಾರಣದಿಂದಾಗಿ ಬ್ಯಾಂಕಿನ ಪ್ರಗತಿ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೇ ಸಾಗಿ ಇಂದು ಕರ್ನಾಟಕ ರಾಜ್ಯದ 266 ಪಟ್ಟಣ ಸಹಕಾರಿ ಬ್ಯಾಂಕುಗಳ ಪಟ್ಟಿಯಲ್ಲಿ ಮೊದಲ 10 ರಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಆಡಳಿತ ಮಂಡಳಿ ಹಿರಿಯರ ಮತ್ತು ಕಿರಿಯರ ಸಮ್ಮಿಲನದಿಂದ ಕೂಡಿದ ಒಂದು ಸದೃಡ ತಂಡವಾಗಿದ್ದು ಈ ತಂಡದಲ್ಲಿ ಕ್ರೀಯಾಶೀಲ ವ್ಯಕ್ತಿತ್ವವುಳ್ಳ ಮಾಜಿ ಅಧ್ಯಕ್ಷರಾದ ಶ್ರೀ ರುದ್ರೇಗೌಡ ಹಾಗೂ ಉಪಾಧ್ಯಕ್ಷರಾದ ಶ್ರೀ ಸಿ.ಜಿ.ವಿಜಯಕುಮಾರ್, ನಿರ್ದೇಶಕರುಗಳಾದ ಶ್ರೀಯುತ ಬಿ.ಹೆಚ್.ನರಸಿಂಹಯ್ಯ, ಎಲ್.ಗಂಗಾಧರ್, ಸಿ.ಜಿ.ಜಯಲಕ್ಷ್ಮಿ, ಎಂ.ಎಸ್.ವಿಜಯಸಾರಥಿ, ಪಿ.ಎಸ್.ರಮೇಶ್, ಬಿ.ಅರವಿಂದ್, ಚಿಕ್ಕಣ್ಣಗೌಡ ಹಾಗೂ ಸಿದ್ದರಾಮುರವರಂತಹ ಯುವ ತಂಡ ಅತ್ಯಂತ ಸ್ಫೂರ್ತಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕು ಇನ್ನೂ ಹೆಚ್ಚು ಪ್ರಗತಿ ಸಾಧಿಸುವುದರಲ್ಲಿ ಸಂದೇಹವಿಲ್ಲ.
Back to Top